ಕವನ
ನಶೆಯ ಕಳೆದು ಉಷೆಯು ಬರಲು ಹೊಂಬೆಳಕಿನ ಅಭಿಷೇಕ ಬಿರಿದ ಮೊಗ್ಗರಳಿ ಹಕ್ಕಿ ಇಂಪಾಗಿ ಆಡಲು ಎಂಥ ಚಂದವೀ ಪುಳಕ ಎದೆ ಮೇಲಿನ ಮಂಜಿನ ಹನಿಯಲ್ಲಿ ನೇಸರ ಬರೆದ ಕಿರಣ ಲೇಖನಿಯಲ್ಲಿ ಮುಂಜಾನೆಯ ಸುಂದರ ಕವನ ನಿಸರ್ಗದ ಆ ಪ್ರಶಾಂತತೆಯಲ್ಲಿ ಸಮಚಿತ್ತದ ಅನುಭಾವದಲ್ಲಿ ಆಹ್ಲಾದತೆಯ ನೆರಳು-ಬೆಳಕಿನ ಗೆಳೆತನ ಹರಿಯುವ ನೀರಿನ ಜುಳುಜುಳು ನಾದ ಮಧು ಹೀರುವ ದುಂಬಿ ನೀನಾದ ಪ್ರಕೃತಿ ಉಲಿದ ಇನಿದನಿ ಸಂಗೀತ ತಂಗಾಳಿ ತೀಡುವ ಉನ್ಮಾದ ದಣಿದ ಮನಕೆ ನೀಡಿದೆ ಆನಂದ ತಪ್ಪದೆಂದು ನಿಸರ್ಗದ ಈ ಸಿದ್ಧಾಂತ ಮೂಡಣದರಮನೆ ಬಾಗಿಲು ತೆರೆದು ಬಂದನು ನೇಸರ ಕಿರಣದಿ ಹೊಳೆದು ದಿನ ಬೆಳಗುವ ಕಾಯಕ ಮಾಡಲು ಹೊಡೆದೋಡಿಸಿ ಇನ್ನು ಸೋಮಾರಿತನ ಮೈಮನದಿ ತುಂಬಲಿ ಹೊಸತನ ಸವಿಯೋಣ ಸಂಭ್ರಮದ ಈ ಕ್ಷಣ 0541ಎಎಂ08052022 *ಅಮುಭಾವಜೀವಿ ಮುಸ್ಟೂರು* ಬೇಕಿಲ್ಲದೊಲವು ########## ಬದುಕಿನ ಕಟು ಸತ್ಯಗಳ ಹುಟ್ಟು ಹಾಕಿ ದಡ ಸೇರಿಸಬೇಕೆಂಬ ಹುಮ್ಮಸ್ಸಿನಲ್ಲಿ ಹೊರಟ ಭಾವನೆಗಳ ಹೋರಾಟದಲ್ಲಿ ಅತ್ತ ಧರಿ ಇತ್ತ ಪುಲಿ ಎಂಬ ಹೊಯ್ದಾಟದಲ್ಲಿ ಇದ್ದ ನೆಮ್ಮದಿಯನ್ನು ಕಳೆದುಕೊಂಡು ಜೀವಿಸಬೇಕಾದ ಅನಿವಾರ್ಯದಲ್ಲಿ ತನ್ನತನವನ್ನು ಬಿಟ್ಟುಕೊಡಲಾಗದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲಾಗದೆ ಬಾಳು ಸವೆಯುತಿದೆ. ಬದುಕಿನ ಆಸ್ಥಾನದಲ್ಲಿ ರಾಜನಾಗಿ ವಿರಾಜಮಾನವಾಗಿ ಮೆರೆಯಬಹುದಿತ್ತು ಆದರೂ ಅಷ್ಟಾವಕ್ರತನದ ಮೋಹಕ್ಕೆ ಬಲಿಯಾಗಿ ಇದ್ದ ಮೈಯ ವಾಂಛೆಗಳಿಗೆ ರಾಜ್ಯ ಪಟ್ಟವ ತೊರೆದು ವ್ಯಕ್ತಿತ್ವದ ಹರಣದಲ್ಲಿ ಸುಂದರ...