ಕವನಗಳು
*ಮನೋರೋಗಿ* ನಿನ್ನ ಪ್ರೀತಿಯ ಹುಚ್ಚು ಹೆಚ್ಚಾಗಿ ಹಚ್ಚಿಕೊಂಡು ನಾನಾದೆ ಮನೋರೋಗಿ ಒಲವ ಧ್ಯಾನ ನನ್ನನಾಗಿಸಿತು ಯೋಗಿ ಪ್ರೀತಿಸುತ್ತಲೇ ಇರುವೆ ನಿನಗಾಗಿ ಸಾವಿಗೂ ಸವಾಲು ಹಾಕುವೆ ನೀನೇ ಬದುಕು ನನ್ನೊಲವೆ 0255ಎಎಂ29082020 *ಅಮುಭಾವಜೀವಿ ಮುಸ್ಟೂರು* *ಕಾವಲು* ಓ ನಲ್ಲ ನನ್ನ ಬದುಕೆಲ್ಲಾ ನಿನ್ನದೆಯೊಲವಿಗೆ ಮೀಸಲು ಒಡವೆ ಬೇಡವೇ ಬೇಡ ನೀನಿರುವಾಗ ಇಲ್ಲ ದುಗುಡ ಅಷ್ಟು ಸಾಕಲ್ಲವೇ ಬದುಕಲು ಬಡತನವಿರಲಿ ನೀ ಬಡವನಲ್ಲ ಒಲವಲಿ ಆ ಸಂಪತ್ತಿಗೆ ನಾ ಕಾವಲು 0313ಎಎಂ29082020 *ಅಮುಭಾವಜೀವಿ ಮುಸ್ಟೂರು* ಶಿವಲೀಲಾ ಯಲ್ಲಾಪುರ: ಎಂಥ ಅದ್ಭುತ ನಿವೇದನೆ.. ಸಮದಪ್ಪ ಚಿತ್ರದುರ್ಗ +91 89701 52480: ಒಲವಿನ ನಿವೇದನೆ ಕಾವ್ಯಮಯವಾಗಿದೆ ಭಾವ ಬುತ್ತಿಯಲ್ಲಿ ನಿನ್ನದೇ ತುತ್ತಿನಲ್ಲಿ ಅನುದಿನವೂ ಬದುಕಿರುವೆ ನೋವುಗಳ ಮೆರೆಯುತಲಿ ನಲಿಯುತ್ತಾ ಮನದಲ್ಲಿ ಅನುಕ್ಷಣವೂ ಜೊತೆಗಿರುವೆ ನಾಳೆಗಳ ಕನಸು ಮೊದಲಿಲ್ಲ ನಿನ್ನೆಗಳ ನೆನಪು ಮಾಸಿಲ್ಲ ಇಂದು ನಾ ಆನಂದದಿಂದರುವೆ ನಿನ್ನ ಪ್ರೀತಿಯ ಕಾರಣ ನನ್ನ ಈ ಖುಷಿಗೆ ಪ್ರೇರಣ ಎಂದೆಂದೂ ನಾ ಋಣಿಯಾಗಿರುವೆ ಬದುಕಿನ ಭರವಸೆಯೂ ನೀನು ಸೋಲಿನೊಳಗೂ ಒತ್ತಾಸೆ ನೀನು ಗೆಲುವಿಗಾಗಿ ಸದಾ ಅಣಿಯಾಗಿವೆ ಬೇಕುಗಳ ಪಟ್ಟಿಯೇ ಇಲ್ಲ ಬೇಡವೆನ್ನುವುದು ಗೊತ್ತೇ ಇಲ್ಲ ಕೇಳುವ ಮೊದಲೇ ನೀನೆಲ್ಲ...