ಲೇಖನ
*ಯಾವ ತಪ್ಪಿಗಾಗಿ ನಮ್ಮ ಮಕ್ಕಳಿಗೆ ಈ ಶಿಕ್ಷೆ* ಶಿಕ್ಷಣ ಎನ್ನುವುದು ಪ್ರತಿಯೊಬ್ಬರ ಬದುಕಿನ ಚಿತ್ರಣವನ್ನು ಬದಲಿಸುವ ಪ್ರಮುಖ ಅಸ್ತ್ರ. ನರನನ್ನು ನಾಗರಿಕನನ್ನಾಗಿಸುವ , ನಾಗರಿಕನನ್ನು ಜವಾಬ್ದಾರಿಯುತ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಬಹುದೊಡ್ಡದಿದೆ. ಬೆಳೆಯುವ ಮಕ್ಕಳ ಭವಿಷ್ಯ ಶಿಕ್ಷಣ ಹಾಕುವ ತಳಪಾಯದ ಮೇಲೆ ನಿಂತಿದೆ. ಜ್ಞಾನಾರ್ಜನೆ ಶಿಕ್ಷಣದ ಮೂಲ ಮಂತ್ರ. ಕಲಿಯಬೇಕಾದದ್ದನ್ನು ಕಲಿಯುವ ವಯಸ್ಸಿನಲ್ಲಿ ಕಲಿಸುವ ಮತ್ತು ಅದನ್ನು ಎಷ್ಟರಮಟ್ಟಿಗೆ ಕಲಿತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪರೀಕ್ಷೆ ಒಂದು ಮಾನದಂಡ ಅಷ್ಟೇ. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ಶಕ್ತಿ ಸಾಮರ್ಥ್ಯಕ್ಕೆ ಅನುಸಾರವಾಗಿ ವರ್ಷ ಬಿಡಿ ಕಲಿತದ್ದನ್ನು ಕೇವಲ 3:00 ಗಂಟೆಯಲ್ಲಿ ಎಷ್ಟರಮಟ್ಟಿಗೆ ಅಕ್ಷರದ ರೂಪ ಕೇಳಿಸುವ ಸಾಮರ್ಥ್ಯ ಹೊಂದಿದ್ದಾನೆ ಎಂಬುದನ್ನು ಪರೀಕ್ಷೆಯು ನಿರ್ಧರಿಸುತ್ತದೆ. ಇಲ್ಲಿ ಅಂಕ ಗಳಿಕೆಯಂತೆ ಮೂಲ ಉದ್ದೇಶವಲ್ಲ. ವರ್ಷವಿಡಿ ಕಲಿತದ್ದನ್ನು ಮಗು ಎಷ್ಟು ಮಟ್ಟಿಗೆ ತನ್ನಲ್ಲಿ ಅನ್ವಯಗೊಳಿಸಿಕೊಂಡು ತನ್ನ ಸ್ವಜ್ಞಾನದಿಂದ ಪರಿಶ್ರಮದಿಂದ ತನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನೀಡಿದ ಪ್ರಶ್ನೆ ಪತ್ರಿಕೆಗೆ ಕಲಿತದ್ದನ್ನು ಜ್ಞಾಪಿಸಿಕೊಂಡು ಬರೆದಿಡುತ್ತಾನೆ, ಅದಕ್ಕೆ ನಿಗದಿ ಪಡಿಸಿದ ಅಂಕಗಳನ್ನು ಕಲಿಸಿದವರೇ ಮೌಲ್ಯಮಾಪನ ಮಾಡಿ ತನ್ನ ಶ್ರಮ ಮಕ್ಕಳಿಗೆ ಎಷ್ಟರಮಟ್ಟಿಗೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ಒರೆಗಚ್ಚಿಕೊಳ್ಳಲು ಸಹಾಯಕವಾಗುತ್ತದೆ. ಇ...