ಕವನಗಳು

*ಮನೋರೋಗಿ*

ನಿನ್ನ ಪ್ರೀತಿಯ ಹುಚ್ಚು ಹೆಚ್ಚಾಗಿ 
ಹಚ್ಚಿಕೊಂಡು ನಾನಾದೆ  ಮನೋರೋಗಿ
ಒಲವ ಧ್ಯಾನ ನನ್ನನಾಗಿಸಿತು ಯೋಗಿ
ಪ್ರೀತಿಸುತ್ತಲೇ ಇರುವೆ ನಿನಗಾಗಿ
ಸಾವಿಗೂ ಸವಾಲು ಹಾಕುವೆ
ನೀನೇ ಬದುಕು ನನ್ನೊಲವೆ

0255ಎಎಂ29082020
*ಅಮುಭಾವಜೀವಿ ಮುಸ್ಟೂರು*

*ಕಾವಲು*

ಓ ನಲ್ಲ 
ನನ್ನ ಬದುಕೆಲ್ಲಾ 
ನಿನ್ನದೆಯೊಲವಿಗೆ ಮೀಸಲು
ಒಡವೆ ಬೇಡವೇ ಬೇಡ
ನೀನಿರುವಾಗ ಇಲ್ಲ  ದುಗುಡ 
ಅಷ್ಟು ಸಾಕಲ್ಲವೇ ಬದುಕಲು
ಬಡತನವಿರಲಿ
ನೀ ಬಡವನಲ್ಲ ಒಲವಲಿ
ಆ ಸಂಪತ್ತಿಗೆ ನಾ ಕಾವಲು

0313ಎಎಂ29082020
*ಅಮುಭಾವಜೀವಿ ಮುಸ್ಟೂರು*

ಶಿವಲೀಲಾ ಯಲ್ಲಾಪುರ: ಎಂಥ ಅದ್ಭುತ ನಿವೇದನೆ..

ಸಮದಪ್ಪ ಚಿತ್ರದುರ್ಗ +91 89701 52480: ಒಲವಿನ ನಿವೇದನೆ ಕಾವ್ಯಮಯವಾಗಿದೆ


ಭಾವ ಬುತ್ತಿಯಲ್ಲಿ 
ನಿನ್ನದೇ ತುತ್ತಿನಲ್ಲಿ 
ಅನುದಿನವೂ ಬದುಕಿರುವೆ 

ನೋವುಗಳ ಮೆರೆಯುತಲಿ
ನಲಿಯುತ್ತಾ ಮನದಲ್ಲಿ 
ಅನುಕ್ಷಣವೂ ಜೊತೆಗಿರುವೆ 

ನಾಳೆಗಳ ಕನಸು ಮೊದಲಿಲ್ಲ 
ನಿನ್ನೆಗಳ ನೆನಪು ಮಾಸಿಲ್ಲ 
ಇಂದು ನಾ ಆನಂದದಿಂದರುವೆ 

ನಿನ್ನ ಪ್ರೀತಿಯ ಕಾರಣ 
ನನ್ನ ಈ ಖುಷಿಗೆ ಪ್ರೇರಣ 
ಎಂದೆಂದೂ ನಾ ಋಣಿಯಾಗಿರುವೆ 

ಬದುಕಿನ ಭರವಸೆಯೂ ನೀನು 
ಸೋಲಿನೊಳಗೂ ಒತ್ತಾಸೆ ನೀನು 
ಗೆಲುವಿಗಾಗಿ ಸದಾ ಅಣಿಯಾಗಿವೆ 

ಬೇಕುಗಳ ಪಟ್ಟಿಯೇ ಇಲ್ಲ 
ಬೇಡವೆನ್ನುವುದು ಗೊತ್ತೇ ಇಲ್ಲ 
ಕೇಳುವ ಮೊದಲೇ ನೀನೆಲ್ಲ ಕೊಟ್ಟಿರುವೆ 

ಪ್ರೀತಿಸುವ ಜೀವಕ್ಕೆ 
ಪರವಶನಾದೆ ಆ ಪಾಶಕ್ಕೆ 
ಒಂಟಿತನವ ದೂರಗೈದಿರುವೆ

ಈ ಮೋಹದ ಅನುಭೂತಿ 
ನೀಡಿತೆನೆಗೆ ಬಾಳ ಸದ್ಗತಿ 
ಈ ಬಾಂಧವ್ಯವ ಚಿರಕಾಯುವೆ 

೦೬೫೫ಎಎಂ೨೯೦೮೨೦೨೦
*ಅಮುಭಾವಜೀವಿ ಮುಸ್ಟೂರು*

*ಮಿಲನದ ಸೂಚನೆ*

ಒಡಲಾಳದಲ್ಲಿ ಏನೋ ವೇದನೆ 
ಮನದಿ ಹೇಳಿಕೊಳ್ಳಲಾಗದ ಭಾವನೆ 
ನಿನ್ನ ಕಾಣದ ಬದುಕಿದು ಬರಿ ಯಾತನೆ 
ಕಾಣದು ನಮ್ಮೀರ್ವರ ಮಿಲನದ ಸೂಚನೆ 

ಮಾಮರಕ್ಕೆ ಕೋಗಿಲೆಯ ಸ್ನೇಹ 
ಬಳುಕೊ ಬಳ್ಳಿಗೆ ಮರದ ಆಸರೆ 
ಉಕ್ಕುವ ಅಲೆಗೆ ತೀರದ ಸ್ಪರ್ಶ 
ನನಗೆ ನಿನ್ನೊಲವೇ ಆದರ್ಶ 

ಸೇರಬೇಕು ನಾನು ನೀನು 
ಹೂವಿನ ಜೊತೆ ದುಂಬಿ ಬೆರೆತಂತೆ 
ಬಾಳಬೇಕು ನಾನು ನೀನು 
ನಮ್ಮ ನೋಡಿ ಲೋಕ ಮೆಚ್ಚುವಂತೆ 

ಮಳೆಗಾಗಿ ಇಳೆ ಕಾಯುವಂತೆ 
ಬಲಿತ ಕಾಯಿ ಹಣ್ಣಾಗುವಂತೆ 
ಇರುಳು ಕಳೆದು ಬೆಳಕಾಗುವಂತೆ 
ನಿನಗಾಗಿ ಕಾಯುವೆ ಶಬರಿಯಂತೆ 

ಹಂಬಲಿಸುವ ಹೃದಯಕ್ಕೆ 
ಬೆಂಬಲವಾಗಿ ನಿಲ್ಲು ಬಾ
ಪ್ರೀತಿಯ ಈ ಹೋರಾಟದಲ್ಲಿ 
ನಾವಿಬ್ಬರೂ ಗೆಲ್ಲೋಣ ಬಾ 

೧೨೪೫ಪಿಎಂ೨೯೦೮೨೦೨೦
*ಅಮುಭಾವಜೀವಿ ಮುಸ್ಟೂರು*

 +91 73535 45497: ಅತುತ್ತಮ ಕವಿತೆ 👌👌👌



ಇಲ್ಲಿ ಹರಿಯಬೇಕೆಂದರು ನೀರು
ಇದೆ ಪ್ರಬುದ್ಧರ ತಕರಾರು
ಬೆಳೆಯಲು ಬಿಡದಷ್ಟು ಕಠೋರ
ಇಲ್ಲಿ ಇವರು ವಿಧಿಸಿದ ಕರಾರು

ಭಾವ ಪ್ರವಾಹಕ್ಕೆ ಎಂದು
ಕಟ್ಟೆಯನ್ನು ಕಟ್ಟಲಾದಿತೇ ಹೇಳಿ
ಆದರೂ ಇಲ್ಲಿ ಕಟ್ಟಿಕೊಳ್ಳಲೇಬೇಕು
ಏಕೆಂದರೆ ಇದು ಪಟ್ಟಭದ್ರರ ಫರ್ಮಾನು

ಬಲ ಇಲ್ಲದವನ ಬರಹಕ್ಕೆ
ಇಲ್ಲಿ ನೂರೊಂದು ತಕರಾರು
ಅದರ ಹೊರತಾಗಿಯೂ ನಡೆದರೆ
ಮಾನನಷ್ಟದ ಭಯಹುಟ್ಟಿಸುವರು

ಮೊಳಕೆಯಲ್ಲೇ ಚಿವುಟಿ
ಫಲ ಕೇಳಿದರೆ ಕೊಡುವುದೆಂತು
ಮೌಲ್ಯಯುತ ಜೀವನಕ್ಕೆ ಇಲ್ಲಿ
ನೆಲೆಯಿಲ್ಲದಾಗಿದೆ ಬಳುವುದೆಂತು

0438ಪಿಎಂ29082020
ಅಮುಭಾವಜೀವಿ ಮುಸ್ಟೂರು 

Comments

Popular posts from this blog

ಲೇಖನ