Posts

Showing posts from March, 2020

ಕವನ

*ಇದೀಗ ಪರ್ವಕಾಲ* ಮತ್ತೆ ಬಂದಿದೆ ನೋಡಿ ಪ್ರಜಾ ಪ್ರಭುತ್ವದ ಹಬ್ಬ ಚುನಾವಣೆಯಲಿ ಮತ ಚಲಾವಣೆಯ ಹಕ್ಕು ಸಿಕ್ಕಿದೆ ಅರ್ಹರನು ಆರಿಸಲು ಇದೀಗ ಪರ್ವಕಾಲ ಯಾಮಾರಿದರೆ ಇಲ್ಲಿ ಐದು ವರ್ಷ ಕೊರಗಿ ಕೂರಬೇಕಲ್ಲ ಪ್ರಜೆಗಳಿಂದ ಪ್ರಜೆಗಳಾಗಿ ಪ್ರಜೆಗಳಿಗೋಸ್ಕರ ಸರ್ಕಾರ ಪೊಳ್ಳು ಭರವಸೆಗಳಿಗೆ ಮರುಳಾಗದೆ ಚಲಾಯಿಸಿ ಅಧಿಕಾರ ಮತದಾನ ನಿನ್ನ ಪ್ರಬಲ ಅಸ್ತ್ರ ಭ್ರಷ್ಟನಾಗಿ ಕೆಳಗಿಡದಿರು ಶಸ್ತ್ರ ಕ್ಷಣಿಕ ಅಮಲಿನಲಿ ತೇಲಿ ಮುಳುಗಿ ಸಾಯದಿರು ಉಸಿರುಗಟ್ಟಿ ನಿನ್ನ ಬೆರಳ ತುದಿಯಲ್ಲಿ ಇದೆ ಈ ದೇಶದ ಭವಿಷ್ಯ ನಿನ್ನ ಕರ್ತವ್ಯವ ವಂಚಿಸಿ ಕುಂದಿಸದಿರು ಪ್ರಜಾಪ್ರಭುತ್ವದಾಯುಶ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಜನಪರ ಆಡಳಿತಕೆ ನಿನ್ನ ಒಪ್ಪಿಗೆ ಸೂಚಿಸು ನೆಮ್ಮದಿಯ ಬದುಕು ನಿನ್ನದಾಗಲು ಇಂದೇ ಮತದಾನದಲಿ ನೀ ಭಾಗವಹಿಸು 0905ಎಎಂ 13032019 *ಅಮು ಭಾವಜೀವಿ* ಮತದಾನದ ಜಾಗೃತಿ ಮೂಡಿಸುವ ಪ್ರಯತ್ನ *ಜೀವನದ ಪಯಣದಲ್ಲಿ,,,,,,,,,,,* ಬದುಕು ಎಲ್ಲವನ್ನೂ ಕಲಿಸುತ್ತದೆ. ಆದಷ್ಟು ಅದು ನಮ್ಮ ಆಸೆಗಳನ್ನು ಸೋಲಿಸಿ ನಿರಾಸೆ ಅನ್ನು ಬೆಂಬಲಿಸಿ ಎಟೀನ ಮೇಲೆ ಏಟು ನೀಡುತ್ತಾ ನಮಗೆ ಪಾಠವನ್ನು ಕಲಿಸುತ್ತದೆ. ನಡೆಯುವವನು ಎಡವದೇ ಕುಳಿತವನು ಎಡವಲಾರ ಎಂಬಂತೆ ಜೀವನ ಪಯಣದಲ್ಲಿ ಎಲ್ಲರೂ ಎಡವಿ ಬಿದ್ದವರೇ. ಆದರೆ ಕೊಡವಿ ಎದ್ದವರು ಕಡಿಮೆ. ಹಾಗೇ ಎದ್ದು ಮುನ್ನಡೆದವರು ಇಂದಿನ ಮಹಾ ಸಾಧಕರು. ಬಿದ್ದು ಅಲ್ಲೇ ಆಳುತ್ತಿರುವವರು, ಆದರೂ ಬಂದು ಮೇಲೆತ್ತಲಿ ಎಂದು ಕಾ...

ಕವನ

*#ಬಾಳಸಂಗಾತಿ* ಮಳೆಯೇ ಇಳೆಯ ಸಂಗಾತಿ ಇರುಳಿಗೆ ಬೆಳ್ದಿಂಗಳೇ ಸಂಗಾತಿ ಮಂಜಾನೆಗೆ ಮಂಜು ಹನಿಯೇ ಸಂಗಾತಿ ಹೂವಿಗೆ ದುಂಬಿಯೇ ಸಂಗಾತಿ ನದಿಗೆ ಸಾಗರವೇ ಸಂಗಾತಿ ಅಲೆಗೆ ತೀರವೇ ಸಂಗಾತಿ ಮುಗಿಲಿಗೆ ಮಿಂಚೇ ಸಂಗಾತಿ ಮುಸ್ಸಂಜೆಗೆ ಹೊಂಬಣ್ಣವೇ ಸಂಗಾತಿ ಹಸಿರ ಸಂಭ್ರಮಕೆ ತಂಗಾಳಿಯೇ ಸಂಗಾತಿ ವಸಂತಕೆ ಚೈತ್ರವೇ ಸಂಗಾತಿ ತಾರೆಗಳಿಗೆ ಚಂದ್ರಮನೇ ಸಂಗಾತಿ ರವಿಗೆ ಉಷೆಯೇ ಸಂಗಾತಿ ಸ್ನೇಹಕೆ ಪ್ರೀತಿಯೇ ಸಂಗಾತಿ ಪ್ರೀತಿಗೆ ಸ್ನೇಹವೇ ಸಂಗಾತಿ ನೋವಿಗೆ ನಲಿವೇ ಸಂಗಾತಿ ಬೆಳಕಿಗೆ ನೆರಳೇ ಸಂಗಾತಿ ಗಂಡಿಗೆ ಹೆಣ್ಣೇ ಬಾಳಸಂಗಾತಿ ಹೆಣ್ಣಿಗೆ ಗಂಡೇ ಪ್ರೇಮ ಸಂಗಾತಿ ಹುಟ್ಟಿಗೆ ಸಾವೇ ಸಂಗಾತಿ ಬದುಕಿಗೆ ಬವಣೆಯೇ ಸಂಗಾತಿ ಗೆಲುವಿಗೆ ಸೋಲೇ ಸಂಗಾತಿ ಒಲವಿಗೆ ವಿರಹವೇ ಸಂಗಾತಿ ಜೀವನಯಾನವೇ ಸಂಪ್ರೀತಿ ಆದಿಅಂತ್ಯಕೂ ಪ್ರೀತಿಯೇ ಸ್ಪೂರ್ತಿ 1008ಪಿಎಂ 15032018 *ಅಮು ಭಾವಜೀವಿ* ಅಮ್ಮನಂತ ಕರುಣಾಮಯಿ* ಅಕ್ಕ ಇವಳು ಎರಡನೇ ತಾಯಿ ಅವಳು ಅಮ್ಮನಂತ ಕರುಣಾಮಯಿ ನನಗಿಂತಲೂ ಮುಂಚೆಯೇ ಗರ್ಭದಿ ಜಾಗ ಪಡೆದವಳು ನಾ ಹುಟ್ಟಿದ ಕ್ಷಣದಿಂದಲೇ ಅಕ್ಕನ ಪಟ್ಟದಿ ಸಂಭ್ರಮಿಸಿದವಳು ಕರುಳಬಳ್ಳಿಯ ಬಂಧು ಅವಳು ಕರುಣೆಯಿಂದಲಿ ನನ್ನ ಸಲಹಿದವಳು ತನಗಾಗಿ ಸಿಕ್ಕಿದುದನೆಲ್ಲಾ ನನ್ನೊಂದಿಗೆ ಹಂಚಿಕೊಂಡವಳು ಆಟಪಾಠಗಳೊಂದಿಗೆ ಜೊತೆಯಾಗಿ ಸದಾ ನನ್ನ ಬೆಂಗಾವಲಾದವಳು ಅಮ್ಮನ ಕೆಲಸಕೆ ಸಹಾಯಕಳು ಅಮ್ಮನಂತೆ ನನ್ನ ಸಲಹಿದವಳು ಅಕ್ಕರೆಯ ಪಾಲಕಳು ನಾ ನಕ್ಕರೆ ಖುಷಿ ಪಡ...

ಕವನ

*ಅದಕೇಕೆ ಚಿಂತಿಸುವೆ* ನಮಗೇಕೆ ‌ಹೇಳು ಈ ಬಿರುದು ಸನ್ಮಾನ  ನನಗಾಗಿ ನೀನು ನಿನಗಾಗಿ ನಾನು  ಇರಲು ಯಾವ ಪ್ರಶಸ್ತಿಯೂ  ಇಲ್ಲ  ಅದರ ಸಮಾನ ಅಂಬಿಗನ ಕಾಯಕ ಮಾಡುವ  ನಮಗೇಕೆ ಹೊಗಳಿಕೆಯ ಹಂಗು  ಗುರಿ ಮುಟ್ಟಿಸಿದರಾಯ್ತು  ಕಾಯಕವೇ ದೈವ ಸಮಾನ ಕೋಗಿಲೆಗೆಲ್ಲಿದೆ ಸನ್ಮಾನ  ಪರಪುಟ್ಟ ಎಂಬ ಅವಮಾನ ಆದರೂ ಹಾಡುವುದು ಇಂಪಾಗಿ ಕೇಳುವ ಕಿವಿಗಳಿರಲು ಅದುವ ಸನ್ಮಾನ  ಅರಳುವ ಹೂವು ಎಂದೆಂದೂ  ದೇವರಿಗರ್ಪಿತವಾಗಲೆಂದು ಬಯಸದು ಮಸಣಕೂ ಕೂಡ ಅದು  ನಗು ನಗುತ ಸಾಗಿ ಮಣ್ಣಾಗುವುದು ಇರುಳೆಂದಿಗೂ ಕೊರಗುವುದಿಲ್ಲ ಬಂದೇ ಬರುವುದೊಮ್ಮೆ ಬೆಳಕು  ಅಲ್ಲಿಯವರೆಗೂ ತಾರೆಗಳ ಜೊತೆ  ನಲಿಯುತ ಕಾಲ ತಳ್ಳುವುದು ಹೆಜ್ಜೆ ಗುರುತಿನ ಸದ್ದು  ಕೇಳದು ಯಾರಿಗೂ ಅದು ಈಗ ಇದ್ದು ಮತ್ತೆ ಮರೆಯಾಗುವುದು ಅದಕೇಕೆ ಚಿಂತಿಸುವೆ ನಡೆದುಬಿಡು ಒಂಟಿಯಾಗಿ  0839ಪಿಎಂ24032019 *ಅಮು ಭಾವಜೀವಿ* ಇಂದು ಬೆಳಿಗ್ಗೆ ರಸ್ತೆ ಅಪಘಾತದಲ್ಲಿ ದುರಂತ ಸಾವಿಗೀಡಾದ ನಮ್ಮೂರಿನ ಬಾಲಕ "ಕಿರಣ್" ಅವನಿಗೆ ಭಾವಶ್ರದ್ದಾಂಜಲಿ *ಘೋರ ದುರಂತ* ಓ ಸಾವೇ ನಿನಗೆ ನ್ಯಾಯವೇ ಈ ಘೋರ ದುರಂತಕ್ಕೆ ಕೊನೆಯಿಲ್ಲವೇ ಕಿರಣ ಇನ್ನೂ ಬೆಳಗೇ ಇಲ್ಲ ಮತ್ತೆ ಕತ್ತಲೆ ಕವಿಯಿತೇ ಕನಸು ಇನ್ನೂ ಕಣ್ಣಲೇ ಇತ್ತು ಕ್ಷಣದಲ್ಲಿ ಕಮರಿ ಹೋಯಿತೇ ಸಾವೇ ನೀನೆಷ್ಟು ಘೋರವೇ ನೋವಿಗೂ ನೋವಾಗುವಷ್ಟು ಕ್ರೂರವೇ ಯಾವ ರೂಪ ನಿನ್ನದು ಮೊದಲೆ ಹೇಳಬಾರದೇ ಬದುಕ ಭರವಸೆ...