ಕವನ
*ನಿನ್ನ ಮಡಿಲಲಿ* ಈ ಕೋಪ ಸರಿಯಿಲ್ಲ ಆ ರೂಪ ತಾಳಿರುವೆಯಲ್ಲ ದೂರುವ ನಿನ್ನ ಕೋರುವೆ ಮುದ್ದಾಗಿ ಮಾತಾಡು ಚೆಲುವೆ ಮುನಿಸು ತರವೇ ಮುಗುದೆ ನಕ್ಕಾಗ ನೀ ನಮ್ಮ ಹೊಲದ ಗದ್ದೆ ತಂಗಾಳಿ ನೀಡುವಂತೆ ಮುಂಗುರುಳು ಹೂವಾಗಿ ಅರಳಿದವು ಸುಮಗಳು ಏಕಾಂಗಿ ಚಂದಿರನಿಗೆ ನೀ ಜೊತೆಯಾಗು ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು ಹೊಳೆವ ಹೊಂಗೆರೆಯ ಕಿರಣ ನಿನ್ನ ನಗು ನಿನ್ನ ಮಡಿಲಲ್ಲಿ ನಾನಾಗುವೆ ಮಗು ನಿನ್ನ ಪ್ರೀತಿಯ ಮಾತು ಜೇನಂತೆ ಕೋಪದಿ ನುಡಿದರೆ ಗುಡುಗು ಸಿಡಿಲಂತೆ ಆ ನೋಟವು ಕೋಲ್ಮಿಂಚಂತೆ ನಿನ್ನೊಲವು ಸೋನೆ ಮಳೆಯಂತೆ ಸಾಗರ ಕಿನಾರೆಯಲಿ ನಾ ಕಾಯುವೆ ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ ನಿನ್ನೊಳಗೆ ನಾ ಬೆರೆತು ಹೋಗಿ ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ ೦೪೫೧ಪಿಎಂ೩೦೧೧೨೦೨೪ *ಅಪ್ಪಾಜಿ ಎ ಮುಸ್ಟೂರು* ಹಾಕದಿರು ನೀ ಕಣ್ಣೀರು ನನ್ನಾಸೆಗದು ತಣ್ಣೀರು ನಗುನಗುತ ನೀನಿರು ಬದುಕಲಿ ಆನಂದದ ಸೊಡರು ನಲ್ಮೆಯ ಗೆಳತಿಯೆ ನೀನು ನನ್ನ ಪಾಲಿಗೆ ಸವಿ ಜೇನು ನೀನಾಡುವ ಮಾತೆಲ್ಲ ನನಗೆ ಸ್ಪೂರ್ತಿಯ ಚಿಮ್ಮು ಹಲಗೆ ಹೃದಯಕ್ಕೆ ನೀ ಹೇಳು ಸಾಂತ್ವನ ಪ್ರೀತಿಯಲಿ ಬರೆವೆನಾಗ ಕವನ ಖುಷಿ ಖುಷಿಯಾಗಿದ್ದರೆ ಜೀವನ ಸದಾ ಸಂಭ್ರಮದ ಹೂಬನ ನೀನಿಲ್ಲದ ಈ ಬಾಳು ಸೆರೆವಾಸ ನೀನಲ್ಲವೇ ನನ್ನ ಬಾಳ ವಿಶೇಷ ಆರಾಧಸುವೆ ...